ಬದಲಾದ ವಾಚಿನ ಕಾಲ..!!

TYPES WATCHES

TYPES WATCHES

ವಾಚು” ಎಂದ ಕೂಡಲೇ ಪ್ರತಿಯೊಬ್ಬರ ತಲೆಯೊಳಗೂ ನೆನಪಿನ ರೀಲುಗಳು ರಿವೈಂಡ್ ಆಗಲು ಶುರುವಾಗುತ್ತದೆ. ಪ್ರೈಮರಿಯಲ್ಲಿ ಇದ್ದಾಗ ಅಪ್ಪನೋ ಮಾವನೋ ಕೊಡಿಸಿದ ಡಿಜಿಟಲ್ ವಾಚಿನಿಂದ ನೆನಪಿನ ರೀಲುಗಳು ಬಿಚ್ಚಿಕೊಳ್ಳಲು ಆರಂಬಿಸುತ್ತವೆ. ಅದೇ ವಾಚು ಯಾಕೆಂದರೆ ಆ ವಯಸ್ಸಿಗೆ ಗೋಳಾಕಾರದ ವಾಚು ನೋಡಿ ಗಂಟೆ ಲೆಕ್ಕಹಾಕುವ ತಾಕತ್ತು ಇರುತ್ತಿರಲಿಲ್ಲ. ಅಂಕಿ ಸಂಖ್ಯೆಗಳು ಬರುವ ಡಿಜಿಟಲ್ ಗಡಿಯಾರ ಮಾತ್ರವೇ ಆ ವಯಸ್ಸಿನ ಪ್ರಾಪ್ತಿ. ಅದೂ ಗಂಟೆ ನೋಡಲಲ್ಲ. ಅಂಥದ್ದೊಂದು ಸಾಧನವನ್ನು ಕೈಗೆ ಕಟ್ಟಿಕೊಂಡಿದ್ದೇನೆ ಎಂಬ ಹೆಮ್ಮೆ. ಆಗಿನ ಜಾತ್ರೆಯ ಇಪ್ಪತ್ತೈದು ರೂಪಾಯಿ ಕೊಡುತ್ತಿದ್ದ ಸಂತೋಷ ಈಗಿನ ಬ್ಯಾಂಕ್ ಬ್ಯಾಲೆನ್ಸ್ ನೋಡಿದರೂ ಸಮಾಧಾನವಾಗದು. ಈಗ ವಾಚ್ ಕಟ್ಟಿಕೊಂಡರೂ ತೋರಿಸುವುದು ಅದೇ ಟೈಮು. ಆದರೆ ಕಾಲ ಮಾತ್ರ ಕೊಂಚ ಬದಲಾಗಿದೆ. ಊರ ಜಾತ್ರೆಯಲ್ಲಿ ಮಕ್ಕಳಿಗೆ ವಾಚಿಗಿಂತಲೂ ಆಕರ್ಷಕವಾಗಿ ಕಾಣುವ ತರಹೇವಾರಿ ಆಟಿಕೆಗಳು ಬಂದಿವೆ. ಆದರೆ ವಾಚ್ ಮರೆಯಾಗಲಿಲ್ಲ. ಅಲ್ಲೇ ಜನಸಂದಣಿಯಲ್ಲಿ ಪುಟ್ಟ ಮಗು ಲಗುಬಗೆಯಿಂದ ಹೋಗುವ ತಾಯಿಯ ಕೈಯನ್ನು ಒಂದು ಕೈಯಲ್ಲಿ ಹಿಡಿದು ನಡೆಯುತ್ತಿದ್ದರೂ ಗಮನ ಮಾತ್ರ ಮತ್ತೊಂದು ಕೈಯಲ್ಲಿನ ಹೊಸ ವಾಚಿನ ಮೇಲೆ ಇರುತ್ತದೆ. ವಾಚು ಸಿಕ್ಕಿದ ಮೇಲೆ “ಸಂತೆಯ್ಲಿದ್ದರೂ ಚಿಂತೆ ಮರೆತು” ಗುಂಪಿನಲ್ಲೇ ಏಕಾಂತ ಹೊಂದಿಸಿಕೊಳ್ಳುವ ಪುಟ್ಟ ಕಂದಮ್ಮಗಳಿಗೆ ಕಡಿಮೆಯಿಲ್ಲ. ಗಂಟೆ ಎಷ್ಟೇ ಆದರೂ ಅವರ ಪಾಲಿಗೆ ಮುಖ್ಯವಾಗುವುದು ಅದರಲ್ಲಿ ಉರಿಯುವ ಪುಟ್ಟ ಲೈಟು ಮಾತ್ರ.

DIGITAL WATCH

DIGITAL WATCH

    ಮೊದಲೆಲ್ಲ ವಾಚುಗಳಿಗೆ ಕೀ ಕೊಡಬೇಕಿತ್ತು. ಅದು ಬಿಟ್ಟರೆ ದುಬಾರಿ ಅಟೊಮ್ಯಾಟಿಕ್. ನಂತರ ಕ್ಯಾಲ್ಕುಲೇಟರ್ ಇರುವ ವಾಚು, ಮಾತನಾಡುವ ಮಾಚು ಹೀಗೆ ತರಹೇವಾರಿ ಬಂದವು. ಆದರೆ ಮತ್ತೊಂದು ಕಡೆಯಿಂದ ಮೊಬೈಲ್ ಫೋನ್ ಕ್ಷೇತ್ರ ಬೆಳೆಯುತ್ತಾ ಸಾಗಿದಂತೆ ವಾಚುಗಳಲ್ಲಿನ ತಂತ್ರಜ್ಞಾನ ನಮಗೆ ವಿಶೇಷವಾಗಿ ಕಾಣುತ್ತಿಲ್ಲ. ಬ್ಯಾಟರಿಯೇ ಹಾಕದೆ ಮೈ ಶಾಖದಿಂದ ಓಡುವ ವಾಚುಗಳೂ ಇವೆ. ಇಂದಿನ ದುಬಾರಿ ಮೊಬೈಲುಗಳಿಗೆ ಹೋಲಿಸಿ ನೋಡಿದರೆ ಅಂಥ ವಾಚು ತೀರಾ ದುಬಾರಿಯೇನಲ್ಲ. ಒಂದಿಪ್ಪತ್ತು ಸಾವಿರ ರೂಪಾಯಿ, ಆದರೆ ಸಮಯ ನೋಡಲು ಅಷ್ಟು ದುಡ್ಡು ತೆರುವ ಬದಲು ಮೊಬೈಲೇ ತೆಗೆಯೋಣ ಎಂಬುದು ಹೆಚ್ಚಿನವರ ಲೆಕ್ಕಾಚಾರ.ಈ ಲೆಕ್ಕದಲ್ಲಿ ವಾಚುಗಳ ಯುಗ ಮುಗಿಯಬೇಕಿತ್ತು. ಆದರೆ ಹಾಗೆ ಆಗಿಲ್ಲ. ಕಳೆದೆರಡು ವರುಷಗಳಿಂದ ವಾಚುಗಳೂ ಭಾರಿ ವೇಗದಲ್ಲಿ ರೂಪಾಂತರ ಹೊಂದುತ್ತಿವೆ. ಮೊಬೈಲಿನಲ್ಲಿ ಆದ ತಂತ್ರಜ್ಞಾನ ಬೆಳವಣಿಗೆಗಳು ವಾಚಿಗೂ ಆವರಿಸಿ ವಾಚುಗಳು ಸಮಯ ಸೂಚಕನಿಗಿಂತ ಹೆಚ್ಚಿನ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ. ಎಷ್ಟರ ಮಟ್ಟಿಗೆ ಎಂದರೆ ಹೆಸರನ್ನೂ ಬದಲಾಯಿಸಿಕೊಂಡಿವೆ. ಇಂದಿನ ಡಿಜಿಟಲ್ ಯುಗದ ಆಧುನಿಕ ವಾಚುಗಳು “ವೇರೆಬಲ್ ಡಿವೈಸಸ್” ಎಂಬ ಹೊಸ ಹೆಸರಿನೊಂದಿಗೆ, ಹಳೆಯ ರೂಪವೇ ಇದ್ದರೂ ಹೊಸ ಸಾಧ್ಯತೆಗಳೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿವೆ. 

DIGITAL MOBILE WATCHಅವುಗಳು ಟೈಮ್ ತೋರಿಸುವುದಲ್ಲದೆ, ಮೊಬೈಲಿನಲ್ಲಿನ ಸೇಜುಗಳು, ರಿಮೈಂಡರುಗಳು, ಕ್ಯಾಲೆಂಡರು, ಹೀಗೆ ಮೊಬೈಲಿನಲ್ಲಿ ಏನೆಲ್ಲ ತೋರಿಸಲು ಸಾಧ್ಯವೋ, ಅವೆಲ್ಲವನ್ನೂ ತೋರಿಸುವ ಸಾಮರ್ಥ್ಯ ಹೊಂದಿವೆ. ವಾಚಿನಿಂದಲೇ ಇಂಟರ್ನೆಟ್ ಸಂಪರ್ಕವೂ ಸಾಧ್ಯವಿದೆ. ಬೇಕಿದ್ದರೆ ನೂರಕ್ಕೆ ನೂರು ನಿಖರವಾದ ನ್ಯೂಕ್ಲಿಯರ್ ಗಡಿಯಾರದ ಜತೆ ಇಂಟರ್ನೆಟ್ ಮೂಲಕ ಮಾತಾಡಿ ತಾನೇ ಸರಿಯಾದ ಸಮಯ ಹೊಂದಿಸಿಕೊಳ್ಳುತ್ತದೆ.

ಹಾಗಾಗಿ ಇವತ್ತು ನಮಗೆ ಟೈಮು ನೋಡಲು ದಾರಿಗಳು ಹಲವಾರಿವೆ, ಇಲ್ಲದಿರುವುದು ಟೈಮ್ ಸೆನ್ಸ್ ಮಾತ್ರವೇ.

 – ಅನಿತಾ ಬನಾರಿ.

Advertisements

About Drusti

Drusti-vision for better tomorrow, a new born organization, aims at providing new perspective and path to the youth to see “LIGHT” in the dark environment. Since these days visual media has lot of impact, both positive and negative, Drusti’s aim is to create a positive impact on youth, who generally are clueless regarding their future,therefore want to show a bright future through enabling the youth to see new life.
This entry was posted in Education, General and tagged , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s