Critics ಬರೆಯುವ ಕಿರಾತಕರು…!!

write

What to write..??

 ಸಿನಿಮಾದ ಬಗ್ಗೆ ವಿಮರ್ಷೆ ಬರೆಯುವ ಮಹಾ (ಅನಾ)ನುಭವಿಗಳು ತಮಗನಿಸಿದ್ದನ್ನ ಮೊಬೈಲು, ಕಂಪ್ಯೂಟರ್ ನ ಕೀಬೋರ್ಡ್ ಬಳಸಿ ಯೋಚಿಸದೇ ಬರೆಯುವ ಅನಿಸಿಕೆಗಳನ್ನ ಪತ್ರಿಕೆಗಳಲ್ಲಿ, ಫೇಸ್ ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಬಿಡುತ್ತಾರೆ. ಹೀಗೇ ಪ್ರಕಟಣೆಗೊಂಡ ಲೇಖನಗಳನ್ನೇ ಓದಿ ಸಿನಿಮಾ ನೋಡುವ ಜನರು ಸಾಕಷ್ಟಿದ್ದಾರೆ. ಸಿನಿಮಾ ಪ್ರಿಯರನ್ನ ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ‘CRITICS’ ಕೆಲವು ಅನಾನುಭವಿಗಳಿಂದ, ಸಿನಿಮಾದ ಗಾಳಿ-ಗಂಧ ಗೊತ್ತಿಲ್ಲದ ಅವಿವೇಕಿಗಳಿಂದ ಇಂದು ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಗೆಲುವು ಎರಡಕ್ಕೂ ಪೆಟ್ಟು ಬೀಳುತ್ತಿದೆ… ಒಂದು ಸಿನಿಮಾವನ್ನ ತೆರೆಯ ಮೇಲೆ ನೋಡಿದ ಮೇಲಷ್ಟೇ ಒಬ್ಬ ವಿಮರ್ಷಕ ವಿಮರ್ಷೆ ಬರೆಯುವುದು. ಸಿನಿಮಾದ ಯಶಸ್ಸನ್ನ ಒಂದೇ ಕ್ಷಣದಲ್ಲಿ ಹಾಳುಮಾಡುವ ವಿಮರ್ಷಕರು ಸಿನಿಮಾ ತಯಾರಾಗಿ ತೆರೆಯ ಮೇಲೆ ಬರಲು ಎಷ್ಟು ಕಷ್ಟವಿದೆ ಎಂಬುದನ್ನ ಯೋಚಿಸಬೇಕು.

0011

Movie stars

    ಒಬ್ಬ ನಿರ್ದೇಶಕನ ಕನಸು, ನಾಯಕನಟನ ಭವಿಷ್ಯ, ನಿರ್ಮಾಪಕನ ಹಣ, ಎಷ್ಟೋ ಕಾರ್ಮಿಕರ ಶ್ರಮ ಎಲ್ಲವನ್ನೂ ನೀರಿನಲ್ಲಿ ಹೋಮ ಮಾಡುವವರು ಇದೇ ವಿಮರ್ಷಕರು… ಮೊದಲಿಗೆ ನಮ್ಮ ಕನ್ನಡ ಚಿತ್ರರಂಗದ ಮಾರುಕಟ್ಟೆ ಅತೀ ಚಿಕ್ಕದು, ಇದು ಈಗಾಗಲೇ ಪರಭಾಷಾ ಚಿತ್ರಗಳ ಹಾವಳಿಯಿಂದ ನರಳುತ್ತಿದೆ. ಎಷ್ಟೋ ಆಸೆ ಕನಸುಗಳನ್ನ ಹೊತ್ತಿ ಚಿತ್ರರಂಗಕ್ಕೆ ಬಂದಿರುವ ನಿರ್ದೇಶಕ, ನಿರ್ಮಾಪಕ, ನಟ-ನಟಿಯರು ಇಂದು ಸಾಕಷ್ಟು ಸಂಕಷ್ಟದಲ್ಲಿದ್ದಾರೆ…ನಿರ್ಮಾಪಕರಂತೂ ತಮ್ಮ ಮನೆ,ಆಸ್ತಿಗಳನ್ನೆಲ್ಲಾ ಮಾರಿಕೊಂಡು ಬೀದಿಗೆ ಬಂದಿದ್ದಾರೆ. ಇಪ್ಪತ್ತಕ್ಕೂ  ಹೆಚ್ಚು  ವಿಭಾಗಗಳಲ್ಲಿ  ಕೆಲಸ ಮಾಡುವ ನೂರಾರು ತಂತ್ರಜ್ಙರ ಹೊಟ್ಟೆ ತುಂಬುವುದು ಇದೇ ಸಿನಿಮಾಗಳಿಂದ.ಒಬ್ಬ ಲೈಟ್ ಮ್ಯಾನ್ ಯಾವುದೋ ಒಂದು ಬೆಟ್ಟದ ಮೇಲೆ ಒಂದು ಲೈಟನ್ನು ಹೊತ್ತುಕೊಂಡು ಹೋಗುವಾಗ ಆಗುವ ಯಾತನೇ ಅವನಿಗೆ ಮಾತ್ರ ಗೊತ್ತು. ಒಂದುಸುಂದರ ಶಾಟ್ ಗಾಗಿ ಎತ್ತರೆತ್ತರಕ್ಕೆ ಹತ್ತಿ,ಹೆಗಲ ಮೇಲೆ ಕೆಮಾರ ಹೊತ್ತಿ ಸೆರೆಹಿಡಿಯುವ ಛಾಯಾಗ್ರಾಹಕ ಸ್ವಲ್ಪ ಯಾಮಾರಿದರೂ ಕೋಟ್ಯಾಂತರ ರೂಪಾಯಿಯ ಕೆಮಾರದ ಜೊತೆ ತನ್ನ ಜೀವವನ್ನು ಕಳೆದು ಕೊಳ್ಳಬೇಕಾಗುತ್ತದೆ. ಸಾಹಸ ದೃಶ್ಯಗಳನ್ನ ಚಿತ್ರಿಸುವಾಗ ಎಷ್ಟೋ ಸಾಹಸ ಕಲಾವಿದರು ಆಸ್ಪತ್ರೆಗೆ ದಾಖಲಾಗುತ್ತಾರೆ.ಇನ್ನು ಕೆಲವರೂ ಸಾವಿನ ಸಮೀಪಕ್ಕೆ ಧಾವಿಸುತ್ತಾರೆ….ಸೆಟ್ ಹಾಕುವ ತಂತ್ರಜ್ಙರು ಬೃಹದಾಕಾರವಾದ ಫೋಮ್ ಗಳನ್ನ, ಮರದ ದಿಮ್ಮಗಳನ್ನ ಹೊತ್ತು, ಹಗಲು ರಾತ್ರಿ ನಿದ್ದೆಗೆಟ್ಟು ಸೆಟ್ ಹಾಕುತ್ತಾರೆ..ನಿರ್ಮಾಪಕರೂ ಎಲ್ಲರನ್ನೂ ಸಂತೃಪ್ತಿಗೊಳಿಸುವಲ್ಲಿ ಹಾಗೂ ಹೀಗೂ ಯಶಸ್ಸು ಕಾಣುತ್ತಾರೆ.  ಊಟೋಪಾಚಾರವನ್ನ ತಡವಾಗದಂತೆ ಸಮಯಕ್ಕೆ ಸರಿಯಾಗಿ ಕೊಟ್ಟು ಅನ್ನದಾತನಾಗುವ ನಿರ್ಮಾಪಕ ನಿಮ್ಮ ಒಂದು ಯೋಚಿಸದೇ ಬರೆದ ಲೇಖನದಿಂದ ತುತ್ತು ಅನ್ನಕ್ಕೂ ಬೇಡುವಂತೆ ಮಾಡುತ್ತೀರಾ….? ನೂರಾರು ಯೋಜನೆಗಳನ್ನ ಹಾಕಿಕೊಂಡು ಬರುವ ನಿರ್ದೇಶಕ, ನಟ-ನಟಿಯರಿಗೆ ನಿಮ್ಮ ಒಂದು ವಿಮರ್ಷಾ ಲೇಖನ ಎಂತಹ ಪರಿಣಾಮವನ್ನ ಬೀರುತ್ತದೇ ಯೋಚಿಸಿದ್ದೀರಾ…..?

0033
critic writing…

    ಸಾಮನ್ಯ ಜನರಿಗೆ ಇದರಾವುದರ ಅರಿವು ಇರುವುದಿಲ್ಲ. ವಿಮರ್ಷಕರಾದ ನಿಮಗೂ ಇದನ್ನೂ ಯೋಚಿಸುವ ಶಕ್ತಿ ಇಲ್ಲವೇ…? ಪತ್ರಿಕೋದ್ಯಮದಲ್ಲಿರುವ ಅನೇಕಾನೇಕ ದಿಗ್ಗಜ ಅನುಭವಿಗಳಿಂದ ಕೇಳಿ ತಿಳಿಯಿರಿ, ಅಥವಾ ನೀವೇ ಯೋಚಿಸಿ. ಇನ್ನು ಫೇಸ್ ಬುಕ್ನಲ್ಲಿರುವ ವಿಮರ್ಷಕರಂತೂ(ಥೂ) ಅತೀ ಬುದ್ಧಿವಂತರು. ತಮ್ಮ ನೆಚ್ಚಿನ ನಟನ ಚಿತ್ರವಾದರೇ ಐದಕ್ಕೆ ಐದು ಅಂಕ ಕೊಡುತ್ತಾರೆ. ಬೇರೇಯವರ ಸಿನಿಮಾವಾದರೇ ಡಬ್ಬಾಥರಾ ಇದೆ ಎಂದು ಒಂದೇ ವಾಕ್ಯದಲ್ಲಿ ಸಿನಿಮಾವನ್ನ ನೋಡುವವರೂ ನೋಡದಂತೆ ಮಾಡುತ್ತಾರೆ.

    ಸಿನಿಮಾ ಒಂದು ಮನರಂಜನಾ ವಿಷಯವಷ್ಟೇ ಅನಿಸಿದರೂ ಅದು ಒಂದು ಕಾರ್ಖಾನೆ  ಇದ್ದಂತೆ,  ನೂರಾರು ಜನರ ಶ್ರಮದಿಂದ ತಯಾರಾದ ಒಂದು ಉತ್ಪನ್ನವನ್ನ (ಸಿನಿಮಾವನ್ನ) ನೀವು ಬರೆಯುವ ವಿಮರ್ಷೆಯಿಂದ ಹಾಳು ಮಾಡಬೇಡಿ. ಈಗಾಗಲೇ ಕನ್ನಡ ಚಿತ್ರರಂಗ ಸಾಕಷ್ಟು ನಿರ್ಮಾಪಕರನ್ನ ಕಳೆದುಕೊಂಡು  ಎಷ್ಟೋ ತಂತ್ರಜ್ಙರು ಬೀದಿಪಾಲಾಗಿದ್ದಾರೆ. ಇದು ಇನ್ನೂ ಬಿಗಾಯಿಡಿಸುವುದು ಬೇಡ… ನಿಮ್ಮ ವಿವೇಚನಾ ಶಕ್ತಿಯಿಂದ ಚಿತ್ರದಲ್ಲಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಸಹಕಾರಿಯಾಗುವಂತೆ ವಿಮರ್ಷೆ ಬರೆಯಿರಿ…     ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆಯಲಿ, ಮಾರುಕಟ್ಟೆ ಸಹ ವಿಸ್ತರಿಸಲಿ, ಎಲ್ಲಾ ಭಾಷೆಯ ಚಿತ್ರರಂಗಕ್ಕೂ ಕನ್ನಡ ಚಿತ್ರರಂಗ ಮಾದರಿಯಾಗಲಿ……..

:-ಶ್ರೀನಿ

Advertisements

About Drusti

Drusti-vision for better tomorrow, a new born organization, aims at providing new perspective and path to the youth to see “LIGHT” in the dark environment. Since these days visual media has lot of impact, both positive and negative, Drusti’s aim is to create a positive impact on youth, who generally are clueless regarding their future,therefore want to show a bright future through enabling the youth to see new life.
This entry was posted in Business, Education, Film & Entertainment, General and tagged , , , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s