‘ಕಾಮಾತುರಂ ನಭಯಂ ನಾ ಲಜ್ಜಾ’

 

woman rape

woman rape

ಬೆಳಿಗ್ಗೆ ಎದ್ದು ಕಣ್ಣು ಬಿಟ್ಟಾಗಿನಿಂದ ಹಿಡಿದು ರಾತ್ರಿ ಕಣ್ಣು ಮುಚ್ಚಿ ಮಲಗುವವರೆಗೂ ಬರೀ ಅತ್ಯಾಚಾರ ದ ಸುದ್ದಿಯೇ ತಾಂಡವವಾಡುತ್ತಿದೆ.ಯಾವುದೇ ಪತ್ರಿಕೆಗಳನ್ನ ನೋಡಿ, ವಾರ್ತಾವಾಹಿನಿಗಳನ್ನ ನೋಡಿ ಇದೇ ಸುದ್ದಿ.  ಆಫೀಸ್ ಗಳಲ್ಲಿ, ಕಾರ್ಖಾನೆಗಳಲ್ಲಿ, ಎಲ್ಲೆಲ್ಲಿ  ಮಹಿಳೆಯರಿದ್ದಾರೋ ಅಲ್ಲಿ ಕಾಮುಕರು ಇದ್ದೇ ಇರುತ್ತಾರೆ.
7
ವರ್ಷದ ಬಾಲಕಿ ಮೇಲೆ 60ವರ್ಷದ ಮುದುಕನಿಂದ ಬಲಾತ್ಕಾರ,ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಗೆಳತಿಯ ಮೇಲೆ ಗೆಳೆಯರಿಂದ ಅತ್ಯಾಚಾರ,70ವರ್ಷದ ಅಜ್ಜಿಯ ಮೇಲೆ 20ವರ್ಷದ ಯುವಕನಿಂದ ಅತ್ಯಾಚಾರ.ಇದೆಲ್ಲಕ್ಕಿಂತ ಹೇಯವಾದುದೆಂದರೇ ತಂದೆಯಿಂದಲೇ ಮಗಳು ಗರ್ಭಿಣಿಯಾಗಿರುವ ವಿಚಾರ.ಇಷ್ಟಕ್ಕೂ ಇದೆಲ್ಲಾ ಯಾವುದೋ ವಿದೇಶದಲ್ಲಿ ನಡೆದ, ನಡೆಯುತ್ತಿರುವುದಲ್ಲ. ಸಂಸ್ಕೃತಿ-ಸಂಪ್ರದಾಯಗಳಿಗೆ ಮೊದಲ ಸ್ಥಾನ ಪಡೆದಿರುವ ನಮ್ಮ”ಭಾರತ” ದಲ್ಲೇ ನಡೆಯುತ್ತಿರುವ ಘಟನೆಗಳು. ಇಂಥ ಅಮಾನವೀಯ, ಹೇಯ, ಪೈಶಾಚಿಕ ಕೃತ್ಯಗಳಿಂದ ಭಾರತದ ಘನತೆಗೆ ಧಕ್ಕೆ ಉಂಟಾಗುತ್ತಿದೆ.ಅತ್ಯಾಚಾರದ ಸಂಖ್ಯೆಗಳು ದಿನಗಳೆದಂತೆ ಹೆಚ್ಚಾಗಲೂ ಪ್ರಮುಖ ಕಾರಣ ಜಗತ್ತಿನ ಬೆಳವಣಿಗೆ‘.ಹೌದು ಇಂದಿನ ಅ(ಹ)ತ್ಯಾಚಾರಗಳ ಗಣನೀಯ ಏರಿಕೆಗೆ ಪ್ರಮುಖ ಕಾರಣ ಬೆಳವಣಿಗೆ, ಅದೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಅಪ್, ಗೂಗಲ್, ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್, ಕಡಿಮೆಯಾಗುತ್ತಿರುವ ಹೆಣ್ಣುಮಕ್ಕಳ ವಸ್ತ್ರ, ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ, ಗುಣಮಟ್ಟ ಇಲ್ಲದ ಶಿಕ್ಷಣ, ಮುಜುಗರ, ಮೌಢ್ಯತೆ ಇವೆಲ್ಲವೂ ಪ್ರಮುಖ ಕಾರಣಗಳು.

Child Molestation

Child Molestation

ಹದಿನಾರರ ಹರೆಯ ಆಕರ್ಷಣೆಗಳ ಒಡೆಯ ಹದಿನಾರನೇ ವಯಸ್ಸು ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನ ತರುತ್ತದೆ. ಕೆಲವೊಂದು ಹಾರ್ಮೋನ್ ಗಳು ಉತ್ಪತ್ತಿಯಾಗಿವುದರಿಂದ, ಹುಡುಗರಿಗೆ ಹುಡುಗಿಯರ ಮೇಲೆ, ಹುಡುಗಿಯರಿಗೆ ಹುಡುಗರ ಮೇಲೆ ಆಕರ್ಷಣೆ ಹೆಚ್ಚು. ಹೀಗೆ ಆಕರ್ಷಣೆ ಅತೀಯಾದಾಗ ಕಾಮದ ಬಿಸಿಗೆ ಬಲಿಯಾಗುತ್ತಾರೆ.ಇದು ಯೌವ್ವನದಲ್ಲಿ ಸರ್ವೇ ಸಾಮಾನ್ಯವಾಗಿ ನಡೆಯುವಂಥದ್ದು. ಲೈಂಗಿಕ ಶಿಕ್ಷಣ ದ ಅಭಾವದಿಂದ ಈ ಕೃತ್ಯಗಳು ಹೆಚ್ಚುತ್ತಿವೆ. ಸಾಮನ್ಯವಾಗಿ ಭಾರತದಲ್ಲಿ ಅದರಲ್ಲೂ ಕರ್ನಾಟಕದಂತ ಸಂಪ್ರದಾಯ ನಾಡಿನಲ್ಲಿ ಚಿಕ್ಕವಯಸ್ಸಿನಿಂದಲೇ ಗಂಡು ಮಕ್ಕಳು ಹೀಗೇ ಇರಬೇಕು, ಹೆಣ್ಣುಮಕ್ಕಳು ಹೀಗೇ ಇರಬೇಕು ಹಾಗೇ ಹೀಗೇ ಎಂದು ಹೇಳುತ್ತಾ ಕೆಲವೊಂದು ವಿಚಾರಗಳನ್ನ ಮುಚ್ಚಿಡುತ್ತಾ ಬರುತ್ತೇವೆ. ಕೇಳಲು, ಹೇಳಲು ಮುಜುಗರ. ಹಾಗಿದ್ದಾಗ ಮುಚ್ಚಿಟ್ಟಿದನ್ನು ಕದ್ದಾದರೂ ನೋಡುವ ಹವ್ಯಾಸ ಹಿಂದಿನಿಂದಲೂ ಬೆಳೆದು ಬಂದಿದೆ. ಹಾಗಾಗಿ ಹೆಣ್ಣಿನ ಬಗ್ಗೆ ಗಂಡಿಗೆ, ಗಂಡಿನ ಬಗ್ಗೆ ಹೆಣ್ಣಿಗೆ ಒಂದಷ್ಟು ಕುತೂಹಲ ಹಾಗೇ ಉಳಿದಿರುತ್ತವೆ. ಇತ್ತೀಚಿನ ದಿನಗಳಲ್ಲಿ ಇಂಟರ್ ನೆಟ್ ಎಲ್ಲರ ಕೈಗಳಲ್ಲೇ ಇರುವುದರಿಂದ ಅಶ್ಲೀಲತೆಯ ವಿಕಾರ ಪ್ರಪಂಚಕ್ಕೆ ಪ್ರವೇಶ ಪಡೆಯುತ್ತಾರೆ. ಒಳ್ಳೆಯವರಾಗಲೂ ವರುಷ ಬೇಕು, ಕೆಟ್ಟವರಾಗಲೂ ನಿಮಿಷ ಸಾಕುಎಂಬಂತೆ ಕೆಟ್ಟ ಆಲೋಚನೆಗಳಿಂದ ಮನಸ್ಸಿನ ನಿಯಂತ್ರಣವನ್ನ ಕಳೆದುಕೊಳ್ಳುತ್ತಾರೆ.
ದೇವರ ಸ್ಥಾನದಲ್ಲಿದ್ದು ನಮ್ಮನ್ನು ಎಲ್ಲಾ ಸಂಕಷ್ಟಗಳಿಂದ ಕಾಪಾಡಬೇಕಿದ್ದ ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗುತ್ತಾನೆಂದರೇ ಇದಕ್ಕಿಂತ ನಾಚಿಕೆ ಗೇಡಿನ ಸಂಗತಿ ಮತ್ತೊಂದಿಲ್ಲ. ಕಾಮಕ್ಕೆ ಕಣ್ಣಿಲ್ಲ,ಕಾಮುಕರಿಗೆ ಮನಸ್ಸಿಲ್ಲ ಎಂಬುದು ಪದೇ-ಪದೇ ಸಾಬೀತಾಗುತ್ತಿದೆ. ಅಷ್ಟಕ್ಕೂ ಈ ಎಲ್ಲದಕ್ಕೂ ಕಾರಣ ಮನಸ್ಸಿನ ವಿಕೃತ ಭಾವನೆಗಳು.
ಹೆಣ್ಣುಮಕ್ಕಳು ಬೇರೆಯವರ ಮುಂದೆ ತಾನೂ ಹೆಚ್ಚು ಎಂದು ತೋರಿಸಿಕೊಳ್ಳುವ ಒಣಜಂಭದಿಂದ ಅಸಭ್ಯ ಉಡುಪುಗಳನ್ನ ತೊಟ್ಟು ಕಾಮದ ಭಾವನೆಗಳನ್ನು ಮೂಢಿಸಿ ಕೊನೆಗೆ ತಾವೇ ಅದಕ್ಕೆ ಗುರಿಯಾಗುತ್ತಾರೆ (ತಾನೇ ತೊಡಿದ ಹಳ್ಳಕ್ಕೆ ತಾನೇ ಬಿದ್ದಂತೆ). ಪುರುಷರು ಎಲ್ಲರನ್ನೂ ಕಾಮದ ಭಾವದಿಂದ ಕಾಣುವುದನ್ನ ಬಿಟ್ಟು ಸಹೋದರಿ,ಸ್ನೇಹದ ಭಾವದಿಂದ ಕಾಣಬೇಕು. ಅಶ್ಲೀಲ ನುಡಿಗಳು, ಅಶ್ಲೀಲ ಚಿತ್ರಗಳು, ಅಶ್ಲೀಲ ಉಡುಪುಗಳು, ಎಲ್ಲವನ್ನು ನಿಯಂತ್ರಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಹಾಗಿದ್ದಾಗ ಮಾತ್ರ ಹತ್ಯಾಚಾರಗಳು ಕಡಿಮೆಯಾಗುವುದು ಇಲ್ಲವಾದಲ್ಲಿ ಎಷ್ಟೇ ಪ್ರತಿಭಟನೆಗಳು ನಡೆದರೂ ಪ್ರತಿಫಲ ಶೂನ್ಯ. ಇದೆಲ್ಲವನ್ನೂ ನೋಡಿದಾಗ ನಮ್ಮ ಹಿರಿಕರೂ ಬಾಲ್ಯವಿವಾಹ ವನ್ನೇಕೆ ಮಾಡುತಿದ್ದರೆಂಬುದು ತಿಳಿದು ಬರುತ್ತದೆ.ಇನ್ನಾದರೂ ಎಚ್ಚರಗೊಂಡು ಹೆಣ್ಣನ್ನ ದೇವರೆಂದು ಪೂಜಿಸುವ ನಾಡಿನ ಸಂಸ್ಕೃತಿ, ಭಾರತ ದೇಶದ ಮಾನವನ್ನ ಕಾಪಾಡೋಣ..

 

18-violence-against-women 1

— ಶ್ರೀನಿ…

Advertisements

About Drusti

Drusti-vision for better tomorrow, a new born organization, aims at providing new perspective and path to the youth to see “LIGHT” in the dark environment. Since these days visual media has lot of impact, both positive and negative, Drusti’s aim is to create a positive impact on youth, who generally are clueless regarding their future,therefore want to show a bright future through enabling the youth to see new life.
This entry was posted in Education, Environment and social issues., General, International, Social Awareness & Developments and tagged , , , , , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s